ಎಂದೋ ಬಿಡಿಸಿದ ಚಿತ್ರ -
ಹಿಂದೊಂದು ಕಾಲದಲಿ, ದೇಶದಲಿ,
ವರ್ತಮಾನದಿ ಸುಳಿವ ಭೂತದಲ್ಲಿ.
ಕುಡಿಹುಬ್ಬು, ಸುಳಿಗಣ್ಣು
ಮೂಗು ಸಂಪಿಗೆಯೆಸಳು
ನಗೆಯ ಮಲ್ಲಿಗೆಯರಳು
ಮುದ್ದು ಸುರಿಯುವ ಗಲ್ಲ,
ಆಗೆಲ್ಲ;
ಹಾಲ್ಬಿಳುಪು, ಕಡುಗಪ್ಪು,
ಚೆಂಗುಲಾಬಿಯ ಕೆಂಪು,
ನರುಗಂಪು;
ಮಳೆಸುರಿವ ಮುಗಿಲು
ನವಿಲು
ಗರಿ
ಕಾಮನಬಿಲ್ಲು
ಎಲ್ಲೆಲ್ಲು;
ಎಲೆ ಹಸಿರು ಚೆಲ್ಲಾಡಿ,
ಹಳದಿ ಕಿತ್ತಳೆ ಮೋಡಿ;
ಬಣ್ಣಗಳ ರಾಡಿ,
ನೆತ್ತರಿನ ಕಡುಗೆಂಪು-
ಸುರಿಯುವ ಕಣ್ಣ
ನೀರಿಗದ್ದಿದ ಕುಂಚ
ತೊಳೆದಿಟ್ಟು,
ಬಿಸಿಲಿಗಿಕ್ಕಿದ ಚಿತ್ರ;
ಒಣಗಿ ರಟ್ಟು-
ಗಟ್ಟಿದ ನೂರು ಪತ್ರ-
ಗಳ
ಕೆಳಗೆಲ್ಲೋ ಹೂತು ಪೆಟ್ಟಿಗೆಯ
ಬೀಗವ ಜಡಿದು
ಕಳೆದಿದ್ದೆನಲ್ಲ
ಕೈ!
ಆ ಮೇಲೆ
ಸವೆದದ್ದೆಷ್ಟು ವೈಶಾಖ
ಸುರಿದು ಸರಿದದ್ದೆಷ್ಟು ಆಷಾಢ
ಶಿಶಿರ!
ಕಿತ್ತೊಗೆದ ಸುಳಿಬಳ್ಳಿ ಮತ್ತೆಲ್ಲೋ ಬೇರಿಳಿಸಿ
ಮರವನೊಂದನು ಹಬ್ಬಿ,
ಹೂತು, ಮಿಡಿ ಕಾಯಾಗಿ
ತೂಗು ತೊಟ್ಟಿಲು ತೂಗಿ,
ನನಗೊಬ್ಬ ಪುಟ್ಟ, ನಿನಗೆ ಪುಟ್ಟಿ.
ಮೊನ್ನೆ,
ಅದೇನೋ, ತುಕ್ಕಿಡಿದ ತಗಡಿನ ಪೆಟ್ಟಿಯೊಳಗಿಂದ
ದಡದಡನೆ ತಟ್ಟಿದಂತಾಗಿ,
ಕ್ಷಣ ಎದೆ ನಡುಗಿ
ತೆರೆದು ನೋಡಿದರೆ
ನೀನು,
ನಗುತ್ತಲಿದ್ದಿ!
"ನೀ ಒಂಚೂರೂ ಬದಲಾಗಿಲ್ಲ"ವೆಂದಿ
"ಬದಲಾಗು" ಎಂದಿ
ಅದ ಅರಗಿಸಿಕೊಳಲು ನಾನಿಲ್ಲಿ ಹೆಣ-
ಗುತ್ತಿರಲು
ನೀ ಆರಾಮ
ಮಾತಾಡುತ್ತಲೇ ಹೋದಿ -
ಪುಟ್ಟನಿಗೆ ವಯಸೆಷ್ಟು? ಪುಟ್ಟಿಯೇನೋದುವಳು;
ಮನೆ, ಗಂಡ, ಕಾರು, ಹೆಂಡತಿ-
ಪಟ್ಟ
ಆನೆ ಬಂತೊಂದಾನೆ...
ಹೌದೇ? ಅದು ನೀನೇನೆ?
ಆ ಕೆನ್ನೆ, ಆ ಕದಪು
ಆ ಚೆದುರು, ನುಡಿ-ನವಿರು,
ಬರಿಯ ಕಿರುನೋಟದೊಳೆ ಸುತ್ತೆಲ್ಲ ಎಳೆಚಿಗುರು -
ಒಳಗೇ ಹೋಲಿಸಿಕೊಂಡೆ;
ಇಲ್ಲ,
ಅದು ನೀನಲ್ಲವೆಂದು ಹೊಳೆದು,
ಎಂದೂ ಅದು ನೀನಾಗಿರಲೇ ಇಲ್ಲೆಂದು ತಲೆಗಿಳಿದು,
ನೆಮ್ಮದಿಯ ನಿಟ್ಟುಸಿರ ಹೊರದಬ್ಬಿದೆ;
ಮತ್ತಷ್ಟು ಖುಶಿಯಿಂದ ನಿನ್ನೊಡನೆ ಹರಟಿ
ಲೋಕಾಭಿರಾಮದಾರಾಮ
ಅನುಭವಿಸಿದೆ;
ಕೊನೆಗೊಮ್ಮೆ ಸ್ಟೈಲಾಗಿ ಬೈ ಹೇಳಿ
ಪೆಟ್ಟಿಗೆಯ ಮೇಲೆ ಮತ್ತೊಂದು
ಹೂವಿಟ್ಟು ಹಗುರಾಗಿ
ನಿದ್ದೆಹೋದೆ.
ನನ್ನ ಇತರ ಬ್ಲಾಗುಗಳು
ಶೀರ್ಷಿಕೆಗಳು
- ೦೧. ಒಳಹೋಗುವ ಮುನ್ನ ಒಂದು ನಿಮಿಷ... (1)
- ೦೨. ಕವನಗಳು (32)
- ೦೩. ಅನುವಾದಿತ (12)
- ೦೪. ಹನಿ-ಮಿನಿ; ಚೂರು-ಚುಟುಕ (5)
- ೦೫. ಕೆಲವು ವಚನಗಳು (4)
- ೦೬. ಪ್ರಚಲಿತ (14)
- ೦೭. ಲಹರಿ (15)
- ೦೮. ಭಾಷೆ (16)
- ೦೯. ಪ್ರವಾಸ (2)
- ೧೦. ಚುಚ್ಚಿದ್ದು - ಕಚ್ಚಿದ್ದು (9)
- ೧೧. ವಿಚಾರ (4)
- ೧೨. ನಾಟಕ/ಮಾತು-ಕತೆ/ಪ್ರಹಸನ... (1)
- ೧೩. ವ್ಯಕ್ತಿಗಳು (6)
- ೧೪. ಅರ್ಥಚಿಂತನೆ (2)
- ೧೫. ಪುಸ್ತಕ (2)
- ೧೬. ಕಾವ್ಯದ ಕುಣಿತ (ಪ್ರಾಸ ಛಂದಸ್ಸು ಇತ್ಯಾದಿ) (3)
- ೧೭ ಪಾಕ (2)
- ೧೮ ಸಂಗೀತರಚನೆಗಳು (3)
- ೧೯. ಭಾರತೀಯಕಾವ್ಯಮೀಮಾಂಸೆ (1)
- ೨೦. ಹಬ್ಬ-ಹರಿದಿನ (1)
- ೯೮. ಇತ್ಯಾದಿ... (6)
- ೯೯. ಇತರ ಬ್ಲಾಗ್ ಬರಹ ಸೇರ್ಪಡೆಗಳು (6)
Tuesday, June 14, 2011
Subscribe to:
Post Comments (Atom)
35 comments:
ಅಸ್ಪಷ್ಟ ನೆನಪು ಕಾಡಿ
ಏನೋ ನೆನಪಾಗಿ
ನಮ್ಮಷ್ಟಕ್ಕೆ ನಾವೇ ನಕ್ಕು
ಪಕ್ಕದಲ್ಲಿದ್ದವರು ಏನೆಂದು ಕೇಳಿದಾಗ
"nothing" ಅಂತ ಹೇಳಿದ ಹಾಗೆ-
Crispy ಕವಿತೆ.. :-)
ಮಂಜು ಸರ್,
ನಮಸ್ಕಾರ. ಸಿಕಾಪಟ್ಟೆ ಹಿಡಿಸಿತು ಕವನ. ಥೇಟ್ ಹನಿಗುಡೋ ಮೋಡ ಕವಿದ ವಾತಾವರಣದಲ್ಲಿ ಮೊಸರನ್ನ, ನಿಂಬೆಕಾಯಿ ಉಪ್ಪಿನಕಾಯಿ ಜೊತೆ ಕರಂ-ಕುರಂ ಅಂತ ಬಿಸಿ ಬಿಸಿ ಅರಳು ಸಂಡಿಗೆ/ಬಾಳ್ಕ ತಿಂದ್ ಹಾಗಾಯ್ತು.
[Like the above comment too]
Excellent poem!
ಸಕತ್ ಕವನ ಮಂಜು ಸರ್.
ಕವನ ಓದಿ ಮುಗಿಸಿದ ಮೇಲೆ ಇದ್ದಕ್ಕಿದ್ದಂತೆ ಮೈ ಮನಸ್ಸೆಲ್ಲಾ ಹಗುರಾಗಿ ಹಾಗೇ ಗಾಳೀಲಿ ತೇಲಿ ಬಂದು ನೆಲ ಸೇರೋ ಹಕ್ಕಿ ಪುಕ್ಕದಂತಹ ಅನುಭವ ಆಯ್ತು :)
ಸೂಪರ್ ಡೂಪರ್....
ಬರೀತಾ ಇರಿ ಸಾರ್.
RJ, ಇಡೀ ಕವನಾನ ಎಷ್ಟು ಚೆನ್ನಾಗಿ summarize ಮಾಡಿಕೊಟ್ರಲ್ಲಾ... ನಾನು ಕಲಿಯಬೇಕಾದ್ದು ಇದು.
ಥ್ಯಾಂಕ್ಸು...
ಸುಶೀಲ್ ಸರ್, ಒಬ್ಬರ ಹಸಿಬಿಸಿ ನೋವನ್ನ ಹೀಗೆ ಬಿಸಿಬಿಸಿ ಸಂಡಿಗೆ/ಬಾಳಕದ ಥರ ಮೆಲ್ಲುವುದು ಸರಿಯೇ? :)
ತಮಾಷೆಗಂದೆ. ಮೆಚ್ಚಿದ್ದಕ್ಕೆ ಧನ್ಯವಾದ
ಸುನಾಥ ಕಾಕಾ, thanks for liking this.
ಸಂತೋಷ್, ನಿಮ್ಮ ಮೆಚ್ಚುಗೆ ನನಗೆ ಸ್ಫೂರ್ತಿ. ಮೆಚ್ಚಿದ್ದಕ್ಕೆ ಧನ್ಯವಾದ.
kachaguliyittu baalyada gelatiya nenapisuva kavana
ಕೊಳ್ಲೇಗಾಲದವರೇ,
ನೀವು ಸುಮ್ಮನೆ ಕೂತ್ರೆ ನಮಗೇ ಲಾಸು. ಬಲ್ಚೆನ್ನಾಗಿ ಬರೆದಿದ್ದೀರಿ. ಬರೀತಿರಿ.
ನೆನಪು ಗಳು ಕೊಡೊ ಅ ಕ್ಷಣದ ಕುಶಿ, ದೊಡ್ಡ ನಿಟ್ಟುಸಿರು ಎಲ್ಲವನ್ನು ಅದ್ಭುತವಾಗಿ ಕಟ್ಟಿ ಕೊಟ್ಟಿದ್ದಿರಿ.
ಕಾಮೆಂಟ್ ಗಳೂ ಅಷ್ಟೇ ಸೂಪರ್ ಆಗಿ ಇದೆ.
ಧನ್ಯವಾದ ಸೀತಾರಾಮರೇ, ಹಳೆಯ ನೆನಪುಗಳೇ ಹಾಗೆ; ಯಾವಾಗಲೋ ಪಕ್ಕನೆ ಬಂದು ಕ್ಷಣ ಕದಲಿಸಿ ಹೋಗಿಬಿಡುತ್ತವೆ. ಹಾಗಿದ್ದಮೇಲೆ ಹಳೆಯ ನೆನಪಿನಬದಲು ಹಳೆಯ ಪಾತ್ರವೇ ಮತ್ತೊಂದು ಗೆಟಪ್ಪಿನಲ್ಲಿ ಎದುರು ಬಂದರೆ ಹೇಗಾಗಬೇಡ. ಅಂಥದ್ದೊಂದನ್ನು ಚಿತ್ರಿಸುವ ಪ್ರಯತ್ನ ಇದು.
ಸುಬ್ರಹ್ಮಣ್ಯ, ಬರೆಯದೇ ಕೂತರೆ ನನಗೂ ಲಾಸು ಅನ್ನುವುದನ್ನು ಕಂಡಿದ್ದೇನೆ. ಬರೆಯುತ್ತಾ ಹೋಗುತ್ತೇನೆ. ನಿಮ್ಮ ಮೆಚ್ಚುಗೆಗೊಂದು ಥ್ಯಾಂಕ್ಸ್
ಬಾಲು, ಬರೆದದ್ದಕ್ಕೆ ಬಂದ ಕಾಮೆಂಟುಗಳನ್ನು ಓದುವುದು ನನಗೂ ಖುಶಿಯೇ! ಮುದ್ರಿತ ಸಾಹಿತಿಗೆ ಇಲ್ಲದ privilege ಇದು.
ಕವನವನ್ನು ಮೆಚ್ಚಿದ್ದಕ್ಕೆ ಧನ್ಯವಾದ.
Typical KSM Style - emotive to the core, sensual, terse and deep in the same breath.
ನಿಮ್ಮ ಕವನಗಳೆಲ್ಲ ಪುಸ್ತಕ ರೂಪದಲ್ಲಿ ಪ್ರಕಟವಾಗುವ ದಿನಕ್ಕೆ ಕಾದು ಕುಳಿತ ರಸಿಕರಲ್ಲಿ ಒಬ್ಬ,
ಶ್ರೀಕಾಂತ್
ಶ್ರೀಕಾಂತ್, ನನ್ನ ಕವನಕ್ಕಿಂತ ನಿಮ್ಮ ವಿಮರ್ಶೆ ಆಳ. ಧನ್ಯವಾದ
soopar..... saar :) double likes
ಮಳೆಯ ಇಳೆಜ ಜೊತೆ ಜೊತೆಗೆ ಮನದ ಭಾವಗಳನ್ನು ರಾಶಿಹಾಕಿಕೊಂಡು ಜೋಡಿಸಿ, ತೆಗದಿಟ್ಟು ಮತ್ತೆ ಜೋಡಿಸಿ, ತುಸುದೂರ ನಿಂತುನೋಡಿ ಕನ್ನಡಿಯಲ್ಲಿ ಪ್ರತಿಬಿಂಬದೊಡನೆ ನಾವೇ ಆಟವಾಡಿದ ರೀತಿಯ ಅದಮ್ಯ ಅನುಭವ ಈ ನಿಮ್ಮ ಕವನ! ಬಪ್ಪರೇ ಬಹುಪರಾಕ್ !
ಸರ್..
ನಿಮ್ಮ ಹಸಿಬಿಸಿ ನೆನಪು ಆವತ್ತಿಗಷ್ಟೇ ನೋವು..
ಮೆಲುಕು ಹಾಕೋಂಥ ಯಾವ ನೆನಪೂ ಇವತ್ತಿಗೆ ನೋವಾಗಿ ಉಳಿದಿರೋಲ್ಲ...
ಇವತ್ತಿಗೆ ಅದು ಎಲ್ಲರಿಗೂ ದಕ್ಕಿದ ಈ ಅದ್ಭುತ 'ಕವನ'ವಷ್ಟೇ..
ನೀವು ಬರೀತಿರಿ..ನಾವು ಬರ್ತಿರ್ತೀವಿ... :)
ಜಯಂತ್, ನಿಮಗೆ ಡಬಲ್ ಥ್ಯಾಂಕ್ಸ್ :)
ಭಟ್ಟರೇ, ಆಹಾ, ಏನು ಕಲ್ಪನೆ! ನಿಮ್ಮ ಪ್ರತಿಕ್ರಿಯೆಯೇ ಕವನದಂತಿದೆ :) ಧನ್ಯವಾದ.
ಸುಶೀಲರೇ, ಅದು ನನ್ನ ಹಸಿಬಿಸಿ ನೋವಲ್ಲ :) ಇರಲಿ, "ಹಸಿಬಿಸಿ ನೆನಪು ಆವತ್ತಿಗಷ್ಟೇ ನೋವು..
ಮೆಲುಕು ಹಾಕೋಂಥ ಯಾವ ನೆನಪೂ ಇವತ್ತಿಗೆ ನೋವಾಗಿ ಉಳಿದಿರೋಲ್ಲ..." ಅನ್ನುವ ನಿಮ್ಮ ಮಾತು ನಿಜ, ಸ್ಮಾರ್ಟ್ ಪ್ರೇಮಿಗಳ ಪರಿ ಅದು. ಮೆಚ್ಚಿದ್ದಕ್ಕೆ ನನ್ನಿ.
manju, antu-intu.... nangoo ondu kavana artha aaytu!!!!!
Tumba chennagide....
tumba chennagide nimma kalpane..
jote kavanakke takka padagalu..
very nice..
Nimmava,
Raghu.
O thanks Sowmya, and congratulations :)
ರಾಘು ಅವರೇ, ಮೆಚ್ಚಿದ್ದಕ್ಕೆ ನನ್ನಿ. ಬರುತ್ತಿರಿ.
ಸುಮಧುರ ಕವನ ಸಾರ್.. ಮನಸ್ಸನ್ನು ತಟ್ಟಿ ಭಾವನೆಗಳನ್ನು ಎಬ್ಬಿಸುವಂತಿದೆ..
ಮೊನ್ನೆ,
ಅದೇನೋ, ತುಕ್ಕಿಡಿದ ತಗಡಿನ ಪೆಟ್ಟಿಯೊಳಗಿಂದ
ದಡದಡನೆ ತಟ್ಟಿದಂತಾಗಿ,
ಕ್ಷಣ ಎದೆ ನಡುಗಿ
ತೆರೆದು ನೋಡಿದರೆ
ನೀನು,
ನಗುತ್ತಲಿದ್ದಿ!
ಕವನದ ಚಿತ್ರೀಕರಣ ಸೊಗಸಾಗಿದೆ.
ಪ್ರದೀಪ್ ಮತ್ತು ಅರುಣ್, ಮೆಚ್ಚಿದ್ದಕ್ಕೆ ನನ್ನಿ, ಬರುತ್ತಿರಿ
ಥ್ಯಾಂಕ್ಸ್ ರಘು, ನಿಮ್ಮ ಬ್ಲಾಗ್ ನೋಡಿದೆ. ನಿಮ್ಮ ಚಿತ್ರ-ಬರಹಗಳು ಸೊಗಸಾಗಿವೆ, ಮಾಹಿತಿಯುಕ್ತವಾಗೂ ಕೂಡ.
Manju sir.....
Helbeku andre elru heliddanne helbeku naanu...matte commentna copy hodede ansutte.....I liked it a lottt...Simply i can say....."SUPERB"
Thanks Ashok...
manjunath ji its very nice.
hosa stylenalli bareda hosa kavite malegaalakke olle bisi bisi coffee kudida haage aaytu, tumba chennagide.
hi Manjunath,
tumbaa chennaagide..........
nimma kavanagaLa bhaavave different aagirutte... And, I like it a lot.
:-)
Thanks Rajesh
Thanks Roopa
keep coming
Post a Comment