ಮನದಲೆಲ್ಲೋ ಬಿತ್ತಿ ಬೆಳೆದ ಭಾವದ ಬೀಜ
ಮೊಳೆತು ಜೀವವ ಪಡೆದು ಮಿಸುಕತೊಡಗಿದರೊಮ್ಮೆ
ಹಿತವಾದ ನೋವು, ನರಳಿಕೆ, ಪುಳಕ.
:
ಯಾವುದೋ ಅನುಭವದ ಮಿಲನಕ್ಕೆ ಫಲಗೊಂಡು
ಭಾವದಂಕುರವಾಗಿ ಬೆಳೆದು ಮೈ ಕೈ ತುಂಬಿ
ಬಗೆಯ ಬಸಿರನ್ನೊದೆದು ಹೊರಬರಲು ತುಡಿಯುತಿಹ
ಹೊಸ ಜೀವಕೊಂದು ರೂಪವ ಕೊಡಲು ನುಡಿಗಾಗಿ ತಡಕಾಟ, ತಿಣುಕಾಟ.
:
ಮೈಮನವ ಬಿಗಿಯುವಾಯಾಸ ನೋವಿನ ಕೊನೆಗೆ
ಹೊರಬೀಳ್ವ ಶಿಶು ಏನಾದರಾಗಿದ್ದೀತು!
ಗಂಡೊ, ಹೆಣ್ಣೋ, ಕುಂಟೊ, ಕುರುಡೋ, ಅಥವ ಸತ್ತು ಹುಟ್ಟಿದ್ದೋ!
:
ಹುಟ್ಟಿದ್ದು ತುಂಬುಚಂದಿರನಂಥ ಮುದ್ದು ಮಗುವಾದರೆ
ದಕ್ಕೀತು ನೊಂದ ನೋವಿಗು, ಬೆಂದ ಬೇಗುದಿಗು, ನರಳಿಕೆಗು
ಅರ್ಥ - ಸುಖದ ಅಂತ
:
- ೧೧/೦೪/೧೯೯೬
ನನ್ನ ಇತರ ಬ್ಲಾಗುಗಳು
ಶೀರ್ಷಿಕೆಗಳು
- ೦೧. ಒಳಹೋಗುವ ಮುನ್ನ ಒಂದು ನಿಮಿಷ... (1)
- ೦೨. ಕವನಗಳು (32)
- ೦೩. ಅನುವಾದಿತ (12)
- ೦೪. ಹನಿ-ಮಿನಿ; ಚೂರು-ಚುಟುಕ (5)
- ೦೫. ಕೆಲವು ವಚನಗಳು (4)
- ೦೬. ಪ್ರಚಲಿತ (14)
- ೦೭. ಲಹರಿ (15)
- ೦೮. ಭಾಷೆ (16)
- ೦೯. ಪ್ರವಾಸ (2)
- ೧೦. ಚುಚ್ಚಿದ್ದು - ಕಚ್ಚಿದ್ದು (9)
- ೧೧. ವಿಚಾರ (4)
- ೧೨. ನಾಟಕ/ಮಾತು-ಕತೆ/ಪ್ರಹಸನ... (1)
- ೧೩. ವ್ಯಕ್ತಿಗಳು (6)
- ೧೪. ಅರ್ಥಚಿಂತನೆ (2)
- ೧೫. ಪುಸ್ತಕ (2)
- ೧೬. ಕಾವ್ಯದ ಕುಣಿತ (ಪ್ರಾಸ ಛಂದಸ್ಸು ಇತ್ಯಾದಿ) (3)
- ೧೭ ಪಾಕ (2)
- ೧೮ ಸಂಗೀತರಚನೆಗಳು (3)
- ೧೯. ಭಾರತೀಯಕಾವ್ಯಮೀಮಾಂಸೆ (1)
- ೨೦. ಹಬ್ಬ-ಹರಿದಿನ (1)
- ೯೮. ಇತ್ಯಾದಿ... (6)
- ೯೯. ಇತರ ಬ್ಲಾಗ್ ಬರಹ ಸೇರ್ಪಡೆಗಳು (6)
Sunday, March 18, 2007
Subscribe to:
Post Comments (Atom)
3 comments:
ಅಂತ ಸುಖವೋ ದುಖ:ವೋ ..ಹೊರಬಂದೊಮ್ಮೆ ನಕ್ಕಾಗ ಅಪರಿಮಿತ ಆನಂದ..ಅದೆನೋ ಎದೆ ಭಾರ ಕೆಳಗಿಸಿದಂತ ಅನುಭವ.ಕವನ ಮೂಡುವ ಬಗ್ಗೆ ಸೊಗಸಾದ ಮನಮುಟ್ಟುವ ಕವನ ಸಾರ್
ಧನ್ಯವಾದಗಳು ಜಯಂತ್ ರವರೇ
ನಿಮ್ಮ ಒಡಲಲ್ಲಿ ಇನ್ನೆಷ್ಟು ಬೀಜಗಳು ಹುದುಗವೆಯೋ? ನಿಮ್ಮನ್ನು ನಿರಂತರವಾಗಿ ಕಾಡುವ ಉಪಮೆ ಇದು ಎನ್ನಿಸುತ್ತಿದೆ. ಒಂದರ ಹಿಂದೆ ಇನ್ನೊಂದು ಬೀಜ, ಆದರೆ ಎರಡು ವಿಭಿನ್ನ ಅನುಭವಗಳ ಹುಟ್ಟು. ಕೀಪ್ ಇಟ್ ಅಪ್.
Post a Comment