Sunday, March 25, 2007

ಹಗೆ

ಮತ್ತೊಂದು ಅನುವಾದ; ಮೂಲ James Stephens:

ಆವೊತ್ತು ಸಿಕ್ಕಿದ್ದ ಅವನು,
ನಾನು
ದಿಟ್ಟಿಸಿದೆ, ಬಿಗಿದ ತುಟಿ, ಸಿಟ್ಟು, ಕಿರುಗಣ್ಣ
ನೆಟ್ಟ ನೋಟವ ತೂರಿ ಅವನ ಮುಖದೊಳಗೆ;
ಪಕ್ಕಕ್ಕೆ ಸರಿದು ಕಾಲ್ದೆಗೆಯಲಿರುವಷ್ಟರಲಿ, ಆ ನನ್ನ ಹಗೆಗಾರ -
ಕಲ್ಲೆದೆಯ ಕಾಡಾಡಿ - ನುಡಿದ:
"ಮುಂದೊಂದು ದಿನ, ಇಂದು ಹಿಂದಾದಂದು,
ನಮ್ಮೆಲ್ಲ ಅಸ್ತ್ರ ಪ್ರತ್ಯಸ್ತ್ರಗಳ ಬತ್ತಳಿಕೆ ಬರಿದಾದಂದು
ನಮಗನ್ನಿಸೀತು, ನಾವಿಷ್ಟೊಂದು ದ್ವೇಷಿಸುತ್ತೀವೇಕೆ,
ಸಿಕ್ಕೀತೆ ಹೇಳು ನೆಪವೊಂದಾದರೂ ಅದಕೆ?
ನಮ್ಮ ಹಗೆಯೇ ದೊಡ್ಡ ಒಗಟಂತೆ ಕಂಡೀತು"

ಇಷ್ಟು ಹೇಳಿದ ಅವನು
ಹಿಂದಿರುಗಲಿಲ್ಲ;
ಕಾದ,
ತಿಳೀಯಲು ನನ್ನ ಮನದ ಸೊಲ್ಲ.
ನಾ
ಒಂದು ಕ್ಷಣ ತಡೆದರೂ
ಪ್ರಿಯೆಯ ಮುದ್ದಿಸುವಂತೆ
ನಾನವನ ಮುದ್ದಿಸಿಯೇ ಬಿಡಬಹುದೆನಿಸಿ ಭಯವಾಗಿ...
ಥಟ್ಟನೇ ಓಡಿದೆನು ಅತ್ತ ಜರುಗಿ.

- ೦೬/೦೪/೧೯೯೭

ಮೂಲ:
Hate

My enemy came nigh,
And I
Stared fiercely in his face.
My lips went withing back in grimace,
And stern I watched him with a narrow eye.
Then, as I turned away, my enemy,
That bitter heart and savage, said to me:
"Someday, when this is past,
When all the arrows that we have are cast,
We may ask one another why we hate,
And fail to find a story to relate.
It may seem to us then a mystery
That we should hate each other."

Thus said he,
And did not turn away,
Waiting to hear what I might have to say;
But I fled quickly, fearing if I stayed
I might have kissed him as I would a maid.

2 comments:

Alemari said...

ಶಬ್ದಗಳಿಗೆ ಭಾವ ತುಂಬಿ
ಭಾವಗಳಿಗೆ ಜೀವ ಕೂಡಿಸುವ ಕವಿ
ಮನಸ್ಸಿಗೆ ಸಾಟಿ ಯಾರೋ
ಕಲ್ಪನೆಗಳಿಗೆ ರೆಕ್ಕೆಯನ್ನೂ ಹಚ್ಚದೆ ಹಾರ ಬಿಟ್ಟವರು
ಅನು
ವಾದಿಸಿ ಯಾರದ್ದೋ ಮಾತುಗಳಲ್ಲಿ
ತನ್ನ ಒಡಲಾಳ
ಹೊರಗಿಟ್ಟ ಕವಿ ಸೃಷ್ಟಿ,
ಹೊಸ ಜೀವವಷ್ಟೆ ಸಾಟಿ ಇದಕೆ.

ಶರ್ಮ

Manjunatha Kollegala said...

Beautiful review, ಶರ್ಮ ರವರೇ.

ಅನು
ವಾದಿಸಿ ಯಾರದ್ದೋ ಮಾತುಗಳಲ್ಲಿ
ತನ್ನ ಒಡಲಾಳ
ಹೊರಗಿಟ್ಟ

ಕವನವೊಂದನ್ನು ಅನುವಾದಿಸುವ ತುಡಿತವನ್ನು ಸೊಗಸಾಗಿ ಹಿಡಿದಿಟ್ಟಿದ್ದೀರಿ. "ಕವಿಯ ಹೆಜ್ಜೆ, ಅಂಕಣಕಾರನೂ ಬಲ್ಲ !!!" ;) Thanks for the review