Sunday, July 14, 2019

ಹಿರಿದೆಂಬ ಹದ

ಹಿರಿದೆಂದು ಬಾಗಿದೊಡೆ

ಪದಧೂಳಿ ಕಣ್ಣ ಹೊಕ್ಕಿತ್ತು ನೋಡಾ

ಕಣ್ಣೊಳಗಣ ಕಸವ ಕಿರಿದೆಂಬುದೆಂತೋ ಮಾನಿಸಲದಿನ್ನೆಂತೋ

ಹಿರಿದಪ್ಪೊಡೆ ಕಪ್ಪುರದ ಉರಿಯಂತಿರಬೇಕು

ಹಿರಿದಪ್ಪೊಡೆ ಸಿರಿಗಂಧದ ಮರನಂತಿರಬೇಕು

ಹಿರಿದಪ್ಪೊಡೆ ಸುರಿದು ಪೊರೆವ ಗಗನದಂತಿರಬೇಕು

ಹಿರಿದಪ್ಪೊಡೆ ಹರನೊಲುಮೆ ಶಿರದೊಳಿಪ್ಪಂತಿರಬೇಕು

ನೋವ ಹುಣ್ಣಿಂಗೆರಗುವ ನೊಣನು ಹಿರಿದೆಂಬೊಡದರ ನೊಣಹು ಹಿರಿದಪ್ಪುದೇ

ತನ್ನ ಹುಣ್ಣನೆ ನೆಕ್ಕಿ ನೇವರಿಸುವ ಹಿರಿನೊಣನ

ನೆಗಹಿ ತಿಪ್ಪೆಗೆ ಸಲಿಸೆಂದ ನೋಡಾ ನಮ್ಮ ದಮ್ಮಪುರದ ಮಂಜೇಶನು



1 comment:

sunaath said...

ಅಯ್ಯೋ ಪಾಪ ನೊಣ! ಮಂಜೇಶನ ಕೈಯಲ್ಲಿ ಏನಾಯ್ತು ಗತಿ! ಒಂದು ಜೀವಕ್ಕಿಂತ ಮತ್ತೊಂದು ಜೀವ ಹಿರಿದೆ? ಎಲ್ಲರಿಗೂ ಹಿರಿಯ ಆ ಭುವಿಯೊಡೆಯ ಮಂಜೇಶನೇ!