ನಿನ್ನ ಕೈಲಿಹುದು ಕುಡುಗೋಲೇನು?
ನಾನರಿಯೆ
(ಯಾರ‍್ಯಾರ ಮುಕ್ತಿ ಎಲ್ಲಿಹುದೊ ಬಲ್ಲವರಾರು? -
ಈ ಚಣವೆ ದಿಂಡುರುಳಿ ಮಲಗುವುದೋ
ನಿನ್ನ ತಿರುವಡಿಯ ಹುಡಿಸೇರಿ ನಲುಗುವುದೋ
(ಯಾರ‍್ಯಾರ ಮುಕ್ತಿ ಎಲ್ಲಿಹುದೊ ಬಲ್ಲವರಾರು? -
ಈ ಚಣವೆ ದಿಂಡುರುಳಿ ಮಲಗುವುದೋ
ನಿನ್ನ ತಿರುವಡಿಯ ಹುಡಿಸೇರಿ ನಲುಗುವುದೋ
ನನ್ನದೆಂತೋ!)
ನೀ ಬರುವ ಹಾದಿಯಲಿ ಬಾಡಿರದ ನಗೆ ಹೂವು
ಮೃದುಮಂದಹಾಸದೊಲು ಕಾದಿರುವುದು
ಹೆಸರಿರದ ನೆಪ್ಪಿರದ ಮುಪ್ಪಿರದ ಪುಷ್ಪವಿದು
ಮೊಗವೆತ್ತಿ ನಿನ್ನನೇ ನೋಡುತಿಹುದು
ಗಗನದಿಂ ಕಣ್ಕಿತ್ತು ಭುವಿಗೆ ಚಿತ್ತವನಿತ್ತು
ನೋಡಬಾರದೆ ಕಣ್ಗೆ ಕಣ್ಣ ಬೆರೆಸಿ? -
ವಾಮನನ ಹೆಜ್ಜೆಯದು ಭೂಮಿಗಿಳಿಸುವ ಮುನ್ನ
ಮುಖದ ಚಹರೆಯನಿಷ್ಟು ಎದೆಯೊಳುಳಿಸಿ.
ಹಾದಿಬದಿ ಬೆಳೆದಳಿವ ಗುರುತಿರದ ಹೂವಿದನು
ಕಾಣಬಹುದೇ ಕಂಡು ಹುಡುಕಬಹುದೇ?
ಎಲ್ಲಿಯೋ ಮುಂದೊಮ್ಮೆ ಕಂಡರಳಿ ನಗಲಾಗ
ಬಿರುಮೊಗದಿ ಪರಿಚಯದ ನಗೆಯಿರುವುದೇ?
ನೀ ಬರುವ ಹಾದಿಯಲಿ ಬಾಡಿರದ ನಗೆ ಹೂವು
ಮೃದುಮಂದಹಾಸದೊಲು ಕಾದಿರುವುದು
ಹೆಸರಿರದ ನೆಪ್ಪಿರದ ಮುಪ್ಪಿರದ ಪುಷ್ಪವಿದು
ಮೊಗವೆತ್ತಿ ನಿನ್ನನೇ ನೋಡುತಿಹುದು
ಗಗನದಿಂ ಕಣ್ಕಿತ್ತು ಭುವಿಗೆ ಚಿತ್ತವನಿತ್ತು
ನೋಡಬಾರದೆ ಕಣ್ಗೆ ಕಣ್ಣ ಬೆರೆಸಿ? -
ವಾಮನನ ಹೆಜ್ಜೆಯದು ಭೂಮಿಗಿಳಿಸುವ ಮುನ್ನ
ಮುಖದ ಚಹರೆಯನಿಷ್ಟು ಎದೆಯೊಳುಳಿಸಿ.
ಹಾದಿಬದಿ ಬೆಳೆದಳಿವ ಗುರುತಿರದ ಹೂವಿದನು
ಕಾಣಬಹುದೇ ಕಂಡು ಹುಡುಕಬಹುದೇ?
ಎಲ್ಲಿಯೋ ಮುಂದೊಮ್ಮೆ ಕಂಡರಳಿ ನಗಲಾಗ
ಬಿರುಮೊಗದಿ ಪರಿಚಯದ ನಗೆಯಿರುವುದೇ?
3 comments:
ಅಬ್ಬಾ, ತುಂಬ ಸುಂದರವಾದ ಕವನವೊಂದನ್ನು ಇತ್ತೀಚಿನ ದಿನಗಳಲ್ಲಿ ಓದಿದ ತೃಪ್ತಿ ನನಗಾಯಿತಿಂದು. ಇಂತಹ ಒಳ್ಳೆಯ ಕವಿ ನಿಮ್ಮೊಳಗೆ ಇರಲು, ನೀವು ಕವನರಚನೆಯನ್ನು ಏಕೆ ಕಡೆಗಣಿಸಿದ್ದೀರಿ, ಮಂಜುನಾಥರೆ?
ನಿಮ್ಮ ಮೆಚ್ಚುಗೆಗೆ ಧನ್ಯವಾದ ಸುನಾಥರೇ. ಫೇಸ್ಬುಕ್ ಉಪಯೋಗ ಹೆಚ್ಚಾಗಿ ಬ್ಲಾಗ್ ಲೋಕವೇ ಅವಗಣನೆಗೊಳಗಾಗಿದೆ. ಕವನಗಳು ಹಿಂದೆ ಸರಿಯಲು ಫೇಸ್ಬುಕ್ಕಿನ ಅಬ್ಬರವೂ ಕಾರಣವಿರಬಹುದೇನೋ.
ಸುಂದರವಾಗಿದೆ. ನೀವು ಇದನ್ನು ಫೇಸ್ಬುಕ್ಕಿನಲ್ಲಿ ಹಾಕಿದ್ದೀರಾ? ಓದುಗರಂತೂ ಇದ್ದೇವೆ.
Post a Comment