Saturday, October 24, 2015

ಪುಸ್ತಕಗಳು, ರಂಗುಗಳು ಮತ್ತು ಒಂದು ಕಪ್ಪು ಚಾ

ಇದು ರೂಪಾ ಸತೀಶರ  ಇಂಗ್ಲಿಷ್ ಕವಿತೆ ಯೊಂದರ ಭಾವಾನುವಾದ:
:
ಅವನು, ಸಾಟಿಯಿಲ್ಲದ
ಮಹಾ ಪುಸ್ತಕವಂತೆ!
ನಾನೊಪ್ಪಲಾರೆ,
ಒಳಗೇ ಗೊಣಗಿಕೊಳ್ಳುತ್ತೇನೆ, ಖಂಡಿತಾ,
"ಹೆಚ್ಚಂದ್ರೆ, ಅವನೊಂದು ಚಂದದ ಮುನ್ನುಡಿಯಷ್ಟೇ"

ಹೆಸರೇ ಕೇಳದ
ಮಾಯದ ರಂಗೊಂದು
ಸಿಗದೇ
ಅಳಿಸಿಹಾಕಿದ ಚಿತ್ರ!
ಮುರಿದ ಬಣ್ಣದ ಕಡ್ಡಿಗಳು -
ತುಂಬಬಲ್ಲವೆ ರಂಗು?

ಇರುಳ ಗಾಳಿಗೆ ಸುಯ್ಯುವ
ಮಣ್ಣ ಘಂಟೆಗಳು
ಆಗೀಗ
ಗಾಳಿಮುತ್ತಿನ ಸುಖಕೆ
ಕಿಣಿಗುಡುತಿವೆ

ಮತ್ತೆ, ಮುರಿದ ಕಪ್ಪು -
ಸುಮ್ಮನಿದೆ - ಮಾತಿಲ್ಲ ಕತೆಯಿಲ್ಲ.
ನಾನೇ ರೆಪ್ಪೆಬಡಿದು, ಪಿಸುಗುತ್ತೇನೆ
"ಇನ್ನೊಂದು ಕಪ್ಪು ಟೀ ಸಿಕ್ಕೀತಾ!"
:
:
ಮೂಲ:
Books, Shades & A Cuppa Tea
:
He, the Book
an Opus of sort!
I differ,
I beg,
mumble alone to conclude,
"He's just an interesting Prologue"

A sketch undone
in quest of a shade
"Razzmatazz",
a tinge I never heard!!
Can they,
the broken crayons
still color?

Chimes, the earthy ones
shrilled through
the night air!
Once a while
they kiss,
"Lucky Winds"

And then,
that broken cup
said nothing much.
I wink, I whisper
"Another cuppa tea please"!

https://www.facebook.com/roopa.satish.56/posts/10208193570221404

1 comment:

sunaath said...

ಹಳೆಯ ತಲೆಗಳ ಪರಂಪರಾಗತ ಮನೋಭಾವ ಮಸುಕಾಗಿ ಹೋಗಿದೆ. ಈ ಮನೋಭಾವಕ್ಕೆ ವ್ಯತಿರಿಕ್ತವಾದ ಆಧುನಿಕ ಮನೋಭಾವದ ವ್ಯಕ್ತಿಗಳನ್ನು ನಾವೀಗ ಎಲ್ಲೆಡೆ ಕಾಣುತ್ತಿದ್ದೇವೆ. ಅಂತಹ ಮನೋಧರ್ಮದ ಒಂದು ಇಂಗ್ಲಿಶ್ ಕವನವನ್ನು ನೀವು ಸಮರ್ಥವಾಗಿ ಭಾವಾನುವಾದ ಮಾಡಿ ನೀಡಿದ್ದೀರಿ. ನಿಮಗೆ ಹಾಗು ರೂಪಾ ಅವರಿಗೆ ಅಭಿನಂದನೆಗಳು, ಧನ್ಯವಾದಗಳು.