ಈಗ್ಗೆ ಒಂದೂವರೆ ವರ್ಷದ ಹಿಂದೆ ಇಂಥದ್ದೇ ಒಂದು ಬರಹವನ್ನು ನನ್ನ ಬ್ಲಾಗಿನಲ್ಲಿ ಪ್ರಕಟಿಸಿದ್ದೆ. ಆರ್ಕುಟ್ ನ "3K ಬಳಗ"ದ ಉತ್ಸಾಹೀ ಕವಿಗಳು ಈ ಬಳಗದ ವೇದಿಕೆಯಲ್ಲಿ ಆಗಾಗ ಪ್ರಕಟಿಸಿದ ಆಯ್ದ ಕವನಗಳ ಸಂಕಲನವೊಂದನ್ನು ಹೊರತಂದಿದ್ದರು, ಆಗ.
ಅದಾಗಿ ಒಂದೂವರೆ ವರ್ಷದ ಅವಧಿಯಲ್ಲಿ ಈ ತಂಡ ಸಾಕಷ್ಟು ಬೆಳೆದಿದೆ - ಸಂಖ್ಯೆಯಲ್ಲಿ, ಹುಮ್ಮಸಿನಲ್ಲಿ, ಅನುಭವದಲ್ಲಿ, ಆತ್ಮೀಯತೆಯಲ್ಲಿ. ಆರ್ಕುಟ್ಟಿನಲ್ಲಿ ಕುಡಿಯೊಡೆದ ಬಳ್ಳಿ, ಫೇಸ್ ಬುಕ್ಕನ್ನು ಬಳಸಿ ಕತೆ-ಕವನಗಳ ಸೀಮೆಯನ್ನು ಮೀರಿ ಇನ್ನೂ ಅನೇಕ ಸಾಂಸ್ಕೃತಿಕ-ಸಾಮಾಜಿಕ ಚಟುವಟಿಕೆಗಳಲ್ಲಿ ಹಬ್ಬಿದ್ದರೂ ಮೂಲತಃ ಕವಿಗಳೆಂದೇ ತಮ್ಮನ್ನು ಗುರ್ತಿಸಿಕೊಳ್ಳುವ ಇಚ್ಛೆ ಈ ಉತ್ಸಾಹಿಗಳಿಗೆ. ಕಾವ್ಯಸಂಚಾರದ ಹೆಸರಲ್ಲಿ ಆಗಿಂದಾಗ್ಗೆ ಮೈಸೂರು, ಮಂಗಳೂರು ಹೀಗೆಲ್ಲ ಸಂಚಾರ ಕೈಗೊಳ್ಳುವ ಈ ತಂಡ, ಸ್ಥಳೀಯ ಸಂಸ್ಥೆಗಳೊಡನೆ ಬೆರೆತು ಸಾಹಿತ್ಯಕ-ಸಾಂಸ್ಕೃತಿಕ ವಿನಿಮಯದಲ್ಲಿ ಪಾಲ್ಗೊಳ್ಳುತ್ತದೆ.
ಪ್ರೀತಿತುಂಬಿದ ಈ ಉತ್ಸಾಹೀ ಕವಿಸಮೂಹದ ಮತ್ತೊಂದು ಹೆಜ್ಜೆ - ನೂರು ಕವಿಗಳ ನೂರು ಕವನಗಳನ್ನೊಳಗೊಂಡ ಎರಡನೆಯ ಕವನಸಂಕಲನ "ಶತಮಾನಂ ಭವತಿ" ಇದೀಗ ಬಿಡುಗಡೆಗೆ ಸಜ್ಜಾಗಿದೆ. ಕವನ ಸಂಕಲನವನ್ನು ನಾನು ಸಂಪಾದಿಸಿರುವೆನಾಗಿ, ಕವಿತೆಯ ತೇರಿಗೆ ನನ್ನದೂ ಒಂದು ದವನ.
ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಒಂದೂವರೆ ವರ್ಷದ ನಂತರ ಮತ್ತೆ ಕಬ್ಬಿಗವಕ್ಕಿಗಳ ಕಲರವ ತುಂಬಲಿದೆ. ಇದು ಸಂತೋಷದ ವಿಷಯ. ಬಹುಕಾಲದ ನಂತರ ಬ್ಲಾಗ್ ಲೋಕದ ಹಲಕೆಲವು ಮಿತ್ರರನ್ನು ಭೇಟಿಮಾಡುವ ಹಿಗ್ಗು ನನಗೆ. ನೀವೂ ಬನ್ನಿ.
ದಿನಾಂಕ: ೧೨/೦೫/೨೦೧೩, ಭಾನುವಾರ
ಸಮಯ: ಸಂಜೆ ೫.೩೦

ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು.