ಹಿಂದಿನ ಬರಹದಲ್ಲಿ ಲಘು-ಗುರು ಅಂದರೆ ಏನು ಅಂತ ತಿಳಿದುಕೊಂಡೆವು (ನೋಡಿಲ್ಲದೇ ಇದ್ದರೆ ಆ ಬರಹ ಇಲ್ಲಿದೆ ನೋಡಿ)
ಸುಮ್ಮನೇ ಒಂದು ಸಲ ನೆನಪಿಸಿಕೊಳ್ಳೋಣ. ಲಘು ಅಂದರೆ ಒಂದು ಚಿಟುಕೆ ಹೊಡೆಯುವಷ್ಟು ಕಾಲ. ಗುರು ಅಂದರೆ ಅದರ ಎರಡರಷ್ಟು ಕಾಲ. ಆದ್ದರಿಂದ ಸಾಮಾನ್ಯವಾಗಿ ಎಲ್ಲ ಹ್ರಸ್ವಾಕ್ಷರಗಳೂ ಲಘು; ಎಲ್ಲಾ ಧೀರ್ಘಾಕ್ಷರಗಳೂ ಗುರು. ಒತ್ತಕ್ಷರದ ಹಿಂದಿನ ಅಕ್ಷರ ಅದೇನೇ ಇದ್ದರೂ ಗುರುವೇ. ಸರಳವಾಗಿ ತಿಳಿಯಲು ಇದಿಷ್ಟು ಈಗ್ಗೆ ಸಾಕು. ಈಗ ಬಳಕೆಯಲ್ಲಿ ಈ ಲಘು-ಗುರುಗಳನ್ನು ಸ್ವಲ್ಪ ನೋಡೋಣ.
ಈ ಸಾಲುಗಳನ್ನು ಜೋರಾಗಿ ಓದಿ:
ಚಿಲಿಪಿಲಿ ಉಲಿಯುತ ನಲಿವುದೆ ಸೊಗಸು (ತಕ ತಕ ತಕ ತಕ ಎಂಬಂತೆ - ಚಿಲಿ| ಪಿಲಿ| ಉಲಿ| ಯುತ| ನಲಿ| ವುದೆ| ಸೊಗ| ಸು - ಇಲ್ಲೆಲ್ಲಾ ಎರಡೆರಡು ಮಾತ್ರೆಯ ಜೊತೆಯಾಗಿ ಬಂದಿದೆ)
ಇಲಿಯು ಗಣಪಗೊಲಿಯಿತು (ತಕಿಟ ತಕಿಟ ತಕಿಟ ಎಂಬಂತೆ - ಇಲಿಯು| ಗಣಪ| ಗೊಲಿಯಿ| ತು - ಇಲ್ಲಿ ಮೂರುಮೂರು ಮಾತ್ರೆಯ ಜೊತೆಗಳು ಬಂದುವು)
ತಲೆಯನು ಪರಪರ ಕೆರೆಯುತಲಿಹಳು (ತಕತಕ ತಕತಕ ತಕತಕ ಎಂಬಂತೆ - ತಲೆಯನು| ಪರಪರ| ಕೆರೆಯುತ| ಲಿಹಳು| - ಇಲ್ಲಿ ನಾಲ್ಕು ನಾಲ್ಕು ಮಾತ್ರೆಯ ಜೊತೆ)
ಮನೆಗೆಲಸ ಮುಗಿಸದೆಯೆ ತರಗತಿಗೆ ಹೊರಟ (ತಕತಕಿಟ ತಕತಕಿಟ ತಕತಕಿಟ ಎಂಬಂತೆ - ಮನೆಗೆಲಸ| ಮುಗಿಸದೆಯೆ| ತರಗತಿಗೆ| ಹೊರಟ| - ಇಲ್ಲಿ ಐದೈದು ಮಾತ್ರೆಯ ಜೊತೆ)
ಮನೆಯ ಕೆಲಸವ ಬರೆದು ಮುಗಿಸದೆ ತರಗತಿಗೆ ಇವ ಹೊರಟನು (ತಕಿಟತಕತಕ ತಕಿಟತಕತಕ ಎಂಬಂತೆ - ಮನೆಯ ಕೆಲಸವ| ಬರೆದು ಮುಗಿಸದೆ| ತರಗತಿಗೆ ಇವ| ಹೊರಟನು| - ಇಲ್ಲಿ ಏಳೇಳು ಮಾತ್ರೆಯ ಜೊತೆ)
ಇಲ್ಲಿ ನೀವು ಗಮನಿಸಬೇಕಾದ್ದು ಮೇಲೆ ಬಳಸಿರುವುದೆಲ್ಲಾ ಲಘು (U) ಅಕ್ಷರಗಳೇ! ಅಂದರೆ ಕೇವಲ ಒಂದು ಮಾತ್ರೆಯ (ಒಂದು ಚಿಟುಕೆ ಹೊಡೆಯುವಷ್ಟೇ) ಅಕ್ಷರಗಳು.
ಇದೇ ರೀತಿ ಕೆಲವು ಅಭ್ಯಾಸಗಳನ್ನು ಮಾಡೋಣವೇ? ಮೇಲೆ ಹೇಳಿದ ಯಾವುದಾದರೂ ಲಯದಲ್ಲಿ, ಬರೀ ಲಘು ಅಕ್ಷರಗಳನ್ನೇ ಬಳಸಿ ಏನಾದರೂ ಬರೆಯಿರಿ (ಅದು ಅದ್ಭುತ ಕಾವ್ಯವಾಗಿರಬೇಕಿಲ್ಲ, ಏನಾದರೂ ಆಗಬಹುದು)
ಈಗ ಈ ಸಾಲುಗಳನ್ನು ಜೋರಾಗಿ ಓದೋಣ.
ಕಾ ಕಾ ಕಾಗೇ ಬಂತೂ ನೋಡೀ (ತಾ ತಾ ತಾ ತಾ ಎಂಬಂತೆ - ಕಾ| ಕಾ| ಕಾ| ಗೇ| ಬಂ| ತೂ| ನೋ| ಡೀ| - ಇಲ್ಲಿ ಎರಡೆರಡು ಮಾತ್ರೆಗಳು ಬಂದಿದಿವೆ, ಆದರೆ ಒಂದೊಂದರ ಎರಡು ಲಘುವಿನ ಬದಲು ಒಂದೇ ಗುರು ಬಂದಿದೆ)
ಬಂದಾ ಬಂದಾ ಚಂದಾ ಮಾಮಾ (ತಾತಾ ತಾತಾ ತಾತಾ ತಾತಾ ಎಂಬಂತೆ - ಬಂದಾ| ಬಂದಾ| ಚಂದಾ| ಮಾಮಾ| - ಇಲ್ಲಿ ನಾಲ್ಕು ನಾಲ್ಕು ಮಾತ್ರೆಯ ಜೊತೆ, ಅಂದರೆ ಒಂದೊಂದು ಗುಂಪಿನಲ್ಲೂ ಎರಡೆರಡು ಗುರು)
ರಂಗಯ್ಯಾ ಬಂದವ್ನೇ ಬಾಗ್ಲಲ್ಲೀ ನಿಂದವ್ನೇ (ತಾತಾತಾ ತಾತಾತಾ ತಾತಾತಾ ತಾತಾತಾ ಎಂಬಂತೆ - ರಂಗಯ್ಯಾ| ಬಂದವ್ನೇ| ಬಾಗ್ಲಲ್ಲೀ| ನಿಂದವ್ನೇ| - ಇಲ್ಲಿ ಆರಾರು ಮಾತ್ರೆಯ ಜೊತೆ, ಅಂದರೆ ಒಂದೊಂದು ಗುಂಪಿನಲ್ಲೂ ಮೂರುಮೂರು ಗುರು)
ಇಲ್ಲಿ ನೀವು ಗಮನಿಸಬೇಕಾದ್ದು ಮೇಲೆ ಬಳಸಿರುವುದೆಲ್ಲಾ ಗುರು ( _ ) ಅಕ್ಷರಗಳೇ! ಅಂದರೆ ಎರಡು ಮಾತ್ರೆಯ (ಎರಡು ಚಿಟುಕೆ ಹೊಡೆಯುವಷ್ಟು) ಅಕ್ಷರಗಳು.
ಇದೇ ರೀತಿ ಕೆಲವು ಅಭ್ಯಾಸಗಳನ್ನು ಮಾಡೋಣವೇ? ಮೇಲೆ ಹೇಳಿದ ಯಾವುದಾದರೂ ಲಯದಲ್ಲಿ, ಬರೀ ಗುರು ಅಕ್ಷರಗಳನ್ನೇ ಬಳಸಿ ಏನಾದರೂ ಬರೆಯಿರಿ
ಗೆಳೆಯರೇ, ಇಲ್ಲಿಂದಾಚೆಗೆ ಇದು ನಿಮ್ಮೆಡೆಯಿಂದ ತುಸು ಅಭ್ಯಾಸವನ್ನು ನಿರೀಕ್ಷಿಸುತ್ತದೆ. ಅಭ್ಯಾಸರೂಪದ ಪ್ರತಿಕ್ರಿಯೆಗಳು ಬಂದಷ್ಟೂ ಮುಂದುವರೆಸಲು ಹುರುಪು.
ಇದು ಸ್ವಲ್ಪ ಕೈವಶವಾದ ನಂತರ ಮುಂದುವರೆಯೋಣ.
ಈ ಸರಣಿಯ ಮುಂದಿನ ಬರಹ ಇಲ್ಲಿದೆ.

16 comments:
ಹೆಜ್ಜೆಯ ಮೇಲೊಂದ್ ಹೆಜ್ಜೆಯನಿಕ್ಕುತ
ಸಾಗುತಲಿಹುದು ಕಾವ್ಯದ ಕುಣಿತ
ಅಂತರ್ಜಾಲದ ಮೂಲಕ ಕಲಿತ
ಚಂದವೊ ಚಂದ ಛಂದದ ಗಣಿತ
ಎಂದಿನಂತೆ ಕೊಳ್ಳೆಗಾಲದ ಮಾಸ್ತಾರರ ಉತ್ತಮ ಪ್ರಯೋಗ.
ಇಲ್ಲಿನ ಪ್ರತಿ ಬರಹವನ್ನೂ ನಾನು ಪ್ರಿಂಟ್ ಔಟ್ ತೆಗೆದುಕೊಂಡು ಸಂಗ್ರಹಿಸಿಡುತ್ತಿದ್ದೇನೆ.
ಕೃತೋಸ್ಮಿ ಮಂಜುನಾಥ್ ಸಾರ್.
ನನ್ನ ಬ್ಲಾಗಿಗೂ ಸ್ವಾಗತ...
ನಾವೆಲ್ಲಾ ಕನ್ನಡ ವ್ಯಾಕರಣ ಕಲಿಯುವಾಗ ಬಜಬಜ ಜಂಜರಂ ಬಗೆಗೊಳಲ್ ಎನ್ನುವುದು ನಮಗೆ ಬಹಳ ಖುಷಿಕೊಡುತ್ತಿದ್ದ ಕಾಲ! ಈಗ ಕನ್ನಡ ವ್ಯಾಕರಣವನ್ನೇ ಕಲಿಸುತ್ತಾರೋ ಇಲ್ಲವೋ ಗೊತ್ತಿಲ್ಲ! ಹೋಗಲಿ ಈ ಸಮಯ ಡುಂಡಿಯ 'ಹನಿ' ಯ ಮಜಾ ಸೇವಿಸಿ : [ಇದು ನೇರ ಅವರ ಬರಹ ಅಲ್ಲ-ಸ್ವಲ್ಪ ಭಿನ್ನ ಪದಗಳಲ್ಲಿ ]
ಸತ್ತಾಗ ಭೂತವಾಗದಿರಲೆಂದು ಮಾಡುತ್ತಾರೆ
ಶ್ರಾದ್ಧ-ತಿಥಿ ಗೋಕರ್ಣದಲ್ಲಿ
ಸತ್ತವರು ಭೂತವಾಗುವುದು ಸಹಜ
ನಮ್ಮ ಕನ್ನಡ ವ್ಯಾಕರಣದಲ್ಲಿ !
kudos !!
ಧನ್ಯವಾದ ಎಲ್ಲರಿಗೂ...
Even me too.. Taking a hard copy of this.
A big thanks to you. :)
ಕಲಿಸುತ್ತಿರುವ ತಮಗೆ ವಂದನೆಗಳು.
ಅಭ್ಯಾಸ ಕಷ್ಟ ಸರ್, ಪರೀಕ್ಷೆನೂ ಕೊಡ್ತಿರಾ?
ಹಾಗೆ ಪ್ರಯತ್ನ ಪಯತ್ನ ಪಟ್ಟಿದ್ದೇನೆ, ತಪ್ಪುಗಳ ತಿದ್ದಿ.
೧. ತಕ ತಕ ಕುಣಿವುದು, ಹಸಿರಿನ ನವಿಲು
ಚಿಲಿ ಪಿಲಿ ಉಲಿವುದು, ಹುಡುಗಿಯ ಕೊರಳು
೨. ಕರುಪು ಅವಳ ಗಡಿಗಿ,ಹುಡುಗಗೊಲಿದ ಹುಡುಗಿ
೩. ತಾರೇ ನೀ ಅಕ್ಕಯ್ಯ, ಬೆಲ್ಲಾದಾ ಹೋಳೀಗೀ
ಸಂಕ್ರಾಂತೀ ಹಬ್ಬಾದಾ ಎಳ್ಳೀನಾ ಹೋಳೀಗೀ
ಸ್ವರ್ಣಾ
ಬಾಲು, ಧನ್ಯವಾದ. ನಿಮ್ಮಿಂದ ಅಭ್ಯಾಸಗಳನ್ನು ಎದುರುನೋಡುತ್ತೇನೆ.
ಸ್ವರ್ಣಾ ಅವರೇ, ಅಭ್ಯಾಸ ಕಷ್ಟವೆನ್ನುತ್ತಲೇ ಇಷ್ಟೆಲ್ಲಾ ಮಾಡಿಬಿಟ್ಟಿದ್ದೀರಲ್ಲ! ನಿಮ್ಮ ಸಾಲುಗಳು ಚೆನ್ನಾಗಿವೆ, ಅದರಲ್ಲೂ ತಾರೇ ನೀ ಅಕ್ಕಯ್ಯಾ ಬೆಲ್ಲಾದಾ ಹೋಳಿಗೀ... ಈ ಸಾಲು ಹಿಡಿಸಿತು.
ಹಾಗೇ ಐದು ಮತ್ತು ಏಳು ಮಾತ್ರೆಯ ಲಘುಗಳನ್ನೂ ಮಾಡಿದ್ದರೆ ಚೆನ್ನಿತ್ತು. ಪ್ರಯತ್ನಿಸಿ.
ಹೊಟ್ಟೆ ನೋವೂ ಸಾರ್..
ಅದಕ್ಕೆ ಹೋಂ ವರ್ಕ್ ಮಾಡಿಲ್ಲ!
:-)
ಏನೆಲ್ಲ ಬರೆಯುವ ಕಲೆ ನಿಮಗೆ ಒಲಿದಿದ್ದರೂ ಇಂಥ 'ಮರೆತ' ಪಾಠಗಳನ್ನು ತಿಳಿಹೇಳುವ ಕೆಲಸಕ್ಕೆ ಕೈಹಾಕಿದ್ದೀರಲ್ಲ,
ತುಂಬ ಇಷ್ಟವಾಯಿತು.
With my wishes!
-RJ
ಶಾಲೇಲಿ ಟೀಚರ್ ಗುಡ್ ಅಂಥೆನಾದ್ರು ಅಪ್ಪಿ ತಪ್ಪಿ ಬುಕ್ ನಲ್ಲಿ ಬರೆದ್ರೆ, ಫುಲ್ ಖುಷ್ ಆಗಿ ನಾಳಿನ ಹೋಂವರ್ಕ್ ನ ಇಂದೇ ಮಾಡ್ತಿದ್ವಿ ಸರ್. ಹಾಗೆ ಇದು.
ನಿಮ್ಮ ಅಭಿಪ್ರಾಯದಂತೆ ಪ್ರಯತ್ನಿಸಿರುವೆ.
ಅವ ಬರುವ, ಕಾವ ಇರುವ,
ತೊಳೆವ ಕೊಳೆ, ಹೊಳೆವುದಿಳೆ
ಅವನ ತಟವಟ, ಇವಳ ವಟವಟ
ನಡುವೆ ತನಯರ , ಬದುಕು ಪಟಪಟ
ಸ್ವರ್ಣಾ
RJ, ’ತಿಳಿ ಹೇಳು’ವ ಕೆಲಸವೇನು ಇಲ್ಲ. ಸುಮ್ಮನೇ ತಿಳಿದದ್ದನ್ನು, ತಿಳಿದಷ್ಟನ್ನು ಹಂಚಿಕೊಳ್ಳುವ ಇರಾದೆ ಅಷ್ಟೇ.
ಹೋಮ್ ವರ್ಕ್ ಮಾಡದಿದ್ರೆ ಕ್ಲಾಸಿಗೆ ಸೇರ್ಸಲ್ಲ ಅನ್ನೋಕ್ಕಾಗೊಲ್ಲ, ನೀವು ಅದಕ್ಕೇ ಕಾಯ್ತಾ ಇರ್ತೀರಿ ಅಂತ ಗೊತ್ತು, ’ಆಗಿನ’ಕಾಲದ ಹುಡುಗರು ;) ;)
ಹಹ, ಸ್ವರ್ಣಾಅವರೆ, ತಮಾಷೆಯಾಗಿ ಬರೆಯುತ್ತೀರಿ. "ಕಾವ ಇರುವ" ಅನ್ನೋದು "ಇವ ಇರುವ" ಅಂದುಕೊಳ್ತೀನಿ. ನಿಮ್ಮ ಹೋಮ್ ವರ್ಕ್ ಮುಗೀತು, ಇನ್ನು ಮುಂದಿನ ’ಪಾಠ’ ಬರೋವರ್ಗೂ ನಿರಾಳ :)
ಗುರು,ಶಿಷ್ಯರ ಅಧ್ಯಾಪನ ಹಾಗು ಅಧ್ಯಯನ ತುಂಬ ಉತ್ಸಾಹದಾಯಕವಾಗಿದೆ.
ಮಂಜು ಸಾರ್ ಪಾಠ ಚೆನ್ನಾಗಿದೆ. ಇದು ನನ್ನ ಪ್ರಥಮ ಪ್ರಯತ್ನ, ಅದಕ್ಕೆ ಹೋಮ್ ವರ್ಕ್ ಕಷ್ಟ ಆಗ್ತಿದೆ
ಈ ಎರಡು ಸಾಲು ಬರೆಯೋಕೆ ಎರಡು ದಿನ ಹಿಡೀತು
ಶಶಿಯು ನಿಷೆಯಲಿ ಹೆಣೆದ ಕನಸ
ಉಷೆಯು ಉದಯಿಸಿ ಧರಿಸಿತು
ಸುನಾಥರೇ, ಧನ್ಯವಾದ...
ಕಿರಣರೇ, ತಮ್ಮ ಪ್ರಯತ್ನ ಚೆನ್ನಾಗಿದೆ. ಪದ್ಯದ ಭಾವವೂ ಸೊಗಸಾಗಿದೆ. ಛಂದಸ್ಸಿನಲ್ಲಿ ಒಂದು ಚಿಕ್ಕ ಎಡುಪು. ನಿಮ್ಮ ಸಾಲುಗಳು ಏಳೇಳು ಮಾತ್ರೆಗಳ ಗುಂಪುಗಳೆಂದು ಭಾವಿಸಿ ವಿವರಿಸುತ್ತೇನೆ.
ಶಶಿಯು ನಿಷೆಯಲಿ| ಹೆಣೆದ ಕನಸ
(ಮೊದಲ ಗುಂಪುನಲ್ಲಿ ಏಳು ಮಾತ್ರೆ ಸರಿಯಾಗಿದೆ, ಆದರೆ ಎರಡನೆಯದರಲ್ಲಿ ಬರೀ ಆರು ಮಾತ್ರೆಯಿದೆ - ಹೆಣೆದ ಕನಸನು ಎಂದು ತಿದ್ದಬಹುದು)
ಇದನ್ನೇ ಮೂರುಮೂರು ಮಾತ್ರೆಯ ಗುಂಪಾಗಿಯೂ ಮಾಡಬಹುದು, ತುಸುವೇ ಬದಲಾವಣೆಯೊಂದಿಗೆ:
ಶಶಿ ನಿಷೆಯಲಿ ಹೆಣೆದ ಕನಸ
ಉಷೆ ಉದಯಿಸಿ ಧರಿಸಿತು
ಹೀಗೆ:
ಶಶಿ ನಿ| ಷೆಯಲಿ| ಹೆಣೆದ| ಕನಸ
ಉಷೆ ಉ| ದಯಿಸಿ| ಧರಿಸಿ| ತು
Post a Comment